amazon-affiliate-banner1

Wednesday, 13 February 2019

ತೆರೆದಿದೆ ಮನೆ ಓ ಬಾ ಅತಿಥಿ.......

ಇಂದು ನನ್ನ ಬ್ಲಾಗ್ ನಲ್ಲಿ ನಾನು ಮೊದಲ ಬಾರಿ ನಿಮ್ಮೊಂದಿಗೆ ಕನ್ನಡದಲ್ಲಿ ಮಾತನಾಡುತ್ತಿದ್ದೇನೆ......

ಆದರೆ ಇಲ್ಲಿ ಶಬ್ದಗಳ ಅವಶ್ಯಕತೆ ಇಲ್ಲ.
ನೋಡುವ ನೋಟ, ಆಸ್ವಾದಿಸುವ ಮನಸ್ಸಿದ್ದರೆ ಸಾಕು...



ಒಂದು ಸುಂದರ ಮುಂಜಾವು.
ಎಳೆ ಬಿಸಿಲು.
ತಂಪಾದ ಗಾಳಿ..
ಕರಗುತ್ತಿರುವ ಇಬ್ಬನಿ..
ಉದುರುತ್ತಿರುವ ಪಾರಿಜಾತದ ಹೂಗಳು...
ಮನೆಯಂಗಳದಲ್ಲಿ ಮೂಡಿರುವ ರಂಗೋಲಿ....
ಹಕ್ಕಿಗಳ ಚಿಲಿಪಿಲಿ....
ಕರುಗಳ ಅಂಬಾ.....
ನಸು ನಗುತ್ತಿರುವ ಮಲ್ಲಿಗೆ...
ಅವುಗಳನ್ನು ಮುತ್ತಿಕ್ಕುತ್ತ ಮಕರಂದ ಹೀರುತ್ತಿರುವ ದುಂಬಿಗಳು....
ಇಲ್ಲ...
ನಾನು ಕವಿಯಿತ್ರಿ ಅಲ್ಲ.
ಕವನ ಬರೆಯುತ್ತಿಲ್ಲ...
ನನ್ನ ಸುಂದರವಾದ ಗಿಡ ಮರ ಬಳ್ಳಿಗಳು, ನಾನು ಬೆಳೆಸಿದ ಹೂವುಗಳನ್ನು ನೋಡುವಾಗ ಹುಟ್ಟುವ ಭಾವುಕತೆ ಇದು.
ಈ ಸೌಂದರ್ಯವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುವ ಆಸೆ....
ಬನ್ನಿ.
ತೆರೆದಿದೆ ಮನೆ ಓ... ಬಾ ಅತಿಥಿ.....

ನನ್ನ ಮನೆಯ, ತೋಟದ ಈ ವಿಡಿಯೋ ನೋಡಿ...
ನಿಮ್ಮ ಅಭಿಪ್ರಾಯ ತಿಳಿಸಿ.....
ಇಷ್ಟವಾಯಿತಾ?
ನಿಮ್ಮ ಬಂಧು ಮಿತ್ರರೊಂದಿಗೆ, ಸ್ನೇಹಿತರೊಂದಿಗೆ ಹಂಚಿಕೊಳ್ಳಿ.....

ಮತ್ತೆ ಸಿಗುವವರೆಗೂ.....
ನಗುತ್ತಿರಿ...
ಸಂತೋಷದಿಂದಿರಿ......




No comments:

Post a Comment